ಸೂರಿ 2015 ರ ಕನ್ನಡ ರೋಮ್ಯಾಂಟಿಕ್ ಕ್ರೈಮ್ ಡ್ರಾಮಾ ಚಲನಚಿತ್ರವಾಗಿದ್ದು, ಶ್ರೀಜಯ್ ಬರೆದು ನಿರ್ದೇಶಿಸಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನವಾಗಿದೆ. ಇದರಲ್ಲಿ ದುನಿಯಾ ವಿಜಯ್, ಆಕಾಂಕ್ಷಾ ಮತ್ತು ಪಿ. ರವಿಶಂಕರ್ ನಟಿಸಿದ್ದಾರೆ . ಈ ಚಿತ್ರವನ್ನು ಗೋವಿಂದಾಯ ನಮಃ ಖ್ಯಾತಿಯ ಸುರೇಶ್ ನಿರ್ಮಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವು ನಾಯಕಿ ನಟಿ ಆಕಾಂಕ್ಷಾಗೆ ಮೊದಲ ಚಿತ್ರವಾಗಿದೆ. ಚಿತ್ರದ ಪ್ರಧಾನ ಛಾಯಾಗ್ರಹಣವು ಆಗಸ್ಟ್ 2014 ರಂದು ಪ್ರಾರಂಭವಾಯಿತು, ಮತ್ತು ಚಲನಚಿತ್ರವು 4 ಸೆಪ್ಟೆಂಬರ್ 2015 ರಂದು ಬಿಡುಗಡೆಯಾಯಿತು. ಮಾಧ್ಯಮ ವರದಿಗಳ ಪ್ರಕಾರ, ಈ ಚಿತ್ರವು ಬೆಂಗಳೂರಿನ, ಆವಲಹಳ್ಳಿಯ ಗ್ಯಾಂಗ್ ಸ್ಟರ್ ಎಸ್ಟಿಡಿ ಕುಮಾರನ ಜೀವನ ಕಥೆಯನ್ನು ಆಧರಿಸಿದೆ. == ಪಾತ್ರವರ್ಗ == ಸೂರಿ ಪಾತ್ರದಲ್ಲಿ ದುನಿಯಾ ವಿಜಯ್ ಆಕಾಂಕ್ಷಾ ಪಿ ರವಿಶಂಕರ್ ಆದಿ ಲೋಕೇಶ್ ಮಂಜು ಪ್ರಭಾಸ್ ಪತ್ರೆ ನಾಗರಾಜ್ ವಿನಯ ಪ್ರಸಾದ್ ಬುಲೆಟ್ ಪ್ರಕಾಶ್ ಸಾಧು ಕೋಕಿಲ ಅವಿನಾಶ್ ಶೋಭರಾಜ್ ಮೈಕೋ ನಾಗರಾಜ್ ರಾಜೀವ್ ಗೌಡ ಪ್ರಶಾಂತ್ ಸಿದ್ದಿ ತುಳಸಿ ಶಿವಮಣಿ == ಚಿತ್ರಸಂಗೀತ == ಸೌಂಡ್‌ಟ್ರ್ಯಾಕ್ ಅನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದಾರೆ. ಸಂಗೀತಗಾರ ವಿ.ಹರಿಕೃಷ್ಣ ಒಡೆತನದ ಡಿ-ಬೀಟ್ಸ್ ಸಂಸ್ಥೆಯು ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದೆ. ಜನಪ್ರಿಯ ಗಾಯಕ ಕೆಜೆ ಯೇಸುದಾಸ್ ಅವರು ಚಿತ್ರಕ್ಕಾಗಿ ಹಾಡನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ಇದು ಈ ಸಂಯೋಜಕರೊಂದಿಗೆ ಅವರ ಮೊದಲ ಹಾಡು ಆಗಿದೆ . == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಸೂರಿ @ ಐ ಎಮ್ ಡಿ ಬಿ ಸ್ಯಾಂಡಲ್‌ವುಡ್‌ಕಿಂಗ್‌ನಲ್ಲಿ ಸೂರಿ ನವೀಕರಣಗಳು 2015-07-09 ವೇಬ್ಯಾಕ್ ಮೆಷಿನ್ ನಲ್ಲಿ.